ಅಗ್ರಜ ದಿ ಕ್ಲಬ್‌ನಲ್ಲಿ
Posted date: 14 Wed, Nov 2012 ? 01:39:30 PM
ದಿ ಗ್ರೇಟ್ ಇಂಡಿಯನ್ ಮೂವಿ ಕ್ರಿಯೇಟರ‍್ಸ್ ಲಾಂಛನದಲ್ಲಿ ಚಲನಚಿತ್ರ ಸಂಕಲನಕಾರ, ಟಿ.ಗೋವರ್ಧನ್, ನಿರ್ಮಾಣದ ಮೊದಲ ಚಿತ್ರ  ಭಾರೀ ಬಡ್ಜೆಟ್ಟಿನ ಅಗ್ರಜ ಚಿತ್ರಕ್ಕೆ ಮೈಸೂರು ರಸ್ತೆಯ ದಿ ಕ್ಲಬ್ ನಲ್ಲಿ ಅಗ್ರಜನ ಜೊತೆ ಮುಖ್ಯಮಂತ್ರಿ ಮಾತನಾಡುವ ದೃಶ್ಯಗಳು, ಗುಟ್ಟಲ್ಲಿ ಸರ್ಕಲ್‌ನಲ್ಲಿ ಹಾಸ್ಯ ಪ್ರಧಾನ ದೃಶ್ಯಗಳು ಅಲ್ಲದೆ ಕಂಠೀರವ ಸ್ಟುಡಿಯೋ ಬಳಿ ಇರುವ  ಮನೆಯೊಂದರಲ್ಲಿ ಪ್ರಮುಖ ಕಲಾವಿದರುಗಳು ಪಾಲ್ಗೊಂಡಿದ್ದ ದೃಶ್ಯ ಚಿತ್ರೀಕರಣವಾಯಿತು.
ಈ ಚಿತ್ರಕ್ಕೆ ನಿರ್ದೇಶನ - ಶ್ರೀನಂದನ್ ಇದು ಇವರ ಪ್ರಥಮ ನಿರ್ದೇಶನ ಚಿತ್ರ. ಛಾಯಾಗ್ರಹಣ - ರಮೇಶ್ ಬಾಬು,  ಸಂಗೀತ - ನರೇನ್ ರಾಜ್, ಸಾಹಸ-ರಾಮ್‌ಲಕ್ಷ್ಮಣ್- ರವಿವರ್ಮ, ಸಂಭಾಷಣೆ - ಸಂತೋಷ್, ಮಂಜುಪ್ರಸಾದ್, ಕಲೆ-ಪಿ.ವಿ. ಜಾನ್, ನಿರ್ವಹಣೆ - ವೇಣುಗೋಪಾಲ್, ಈ ಚಿತ್ರದಲ್ಲಿ  ನವರಸ ನಾಯಕ ಜಗ್ಗೇಶ್,  ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಾಮನಾ ಜೇಠ್ಮಲಾನಿ, ಹಾರ್ದಿಕ ಶೆಟ್ಟಿ, ಸದಾಶಿವ ಬ್ರಹ್ಮಾವರ್, ರಂಗಾಯಣ ರಘು, ಅಚ್ಚುತ್ ಕುಮಾರ್, ಸುಚೇಂದ್ರಪ್ರಸಾದ್, ಬಿರಾದರ್, ಕುರಿ ಪ್ರತಾಪ್, ಜೀವನ್, ಅರುಣ್ ಕುಮಾರ್, ಶ್ರೀನಿವಾಸಪ್ರಭು, ರಘುನಾಥರಾವ್ ಕೆ ಯಾದವ್ ಅಭಿನಯಿಸುತ್ತಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed